ಬಹುದಿನಗಳ ಆಸೆ
ಸಿದ್ದಾರ್ಥನ ವಾಕ್ಯದಂತೆ
ಆಸೆಗಳ ಆಸರೆಯಿಲ್ಲದೆ
ಬದುಕಿನುದ್ದಕ್ಕೂ ಬದುಕಬೇಕೆನ್ನುವುದು!
ಇತಿಹಾಸದ ಪುಟಗಳಲ್ಲುಳಿಯಬೇಕು
ಯುದ್ಧ ಗೆದ್ದರು ಬಾಹುಬಲಿಯಂತೆ
ತುಂಡು ಬಟ್ಟೆಯಿಲ್ಲದ
ಜಾತಿ – ಧರ್ಮವನ್ನು ತ್ಯಜಿಸಿ
ಮಾನವೀಯತೆಯಿಂದ ಉಳಿಯಬೇಕು!
ನತದೃಷ್ಟನಾದರು ಪರವಾಗಿಲ್ಲ
ಇದ್ದರೆ ಇರಬೇಕು
ಕರುಣಾಮಯಿ ಕರ್ಣನಂತೆ
ಧರ್ಮ -ಅಧರ್ಮವೆನ್ನದೆ
ಸಮಯಕ್ಕಾದವರ ಸಹಾಯಕ್ಕೆ ಸದಾ!
ಸಾಹಸಿಯಂತೆ ಸೋತರು
ಚರಿತ್ರೆಯಲ್ಲಿ ಅಜರಾಮರ ಸದಾ!
ವರ್ತಮಾನದಲ್ಲಿ ಇವರದೆ ವಾರ್ತೆ
ಆಡು ಮುಟ್ಟದ ಸೊಪ್ಪಿಲ್ಲ
ಧೋನಿ ಎತ್ತದ ಕಪ್ಪಿಲ್ಲ
ಕ್ರಿಕೆಟ್ ಲೋಕ ಕಂಡ
ಅಪರೂಪದ ನಾಯಕನಂತೆ
ಬದುಕನ್ನು ಮುನ್ನಡಿಸೋಣ
ತಾಳ್ಮೆಯಿಂದ ಜಾಣ್ಮೆಯಿಂದ
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
Good