ಕವಿತೆಗಳು

ದೊಡ್ಡಬಸಪ್ಪ ಯಾದಗಿರಿ ಅವರು ಬರೆದ ಕವಿತೆ ‘ಮನದ ನೋವು’

ಜಾರಿ ಹೋದ ಮಧುರ ಬಯಕೆ
ಹೃದಯ ನೆನೆದು ಹಾಡಿದೆ
ನಿನ್ನ ಮನದ ನೋವನರಿತ
ಕನಸಿಗಿಂದು ನೆನಪಿದೆ

ಮನದ ಭಾವ ಮಿಲನದೊಳಗೆ
ಕಳೆದ ಗಳಿಗೆ ನೋವಿದೆ
ನನ್ನೊಲವೇ ಪ್ರೇಮ ಸುರಿದು
ನೂರು ತೊರೆಯು ಮಾಡಿದೆ

ಪ್ರೀತಿ ಮಿಡಿತ ಹೃದಯ ಬಡಿತ
ನಾನರಿತೆ ಕ್ಷಣದಲಿ
ಅರಿಯದವಳ ಒಲವಿಗಾಯ್ತೆ
ಬದುಕು ಆಹುತಿ ಜಗದಲಿ

ಪೆದ್ದು ಗೆಳತಿ ಮುಗ್ಧ ಮನದ
ಸಲುಗೆಯೆಂಬ ಬಳ್ಳಿಯು
ಒಡಲ ಜಲವ ಹೀರಿ ಬೆಳೆದು
ಒಲವು ಬಳುಕಿ ಚಿಗುರಲಿ

ಒಲವಿನಾಸೆ ನೆಪವನೂಡಿ
ಬಯಸಿ ಬಂದೆ ನನ್ನಲಿ
ಏನು ಅರಿಯದ ಹೃದಯ ಗೂಡು
ಹೇಗೆ ನಂಬಿ ತೂಗಲಿ?

SHANKAR G

View Comments

  • ದೊಡ್ಡಬಸಪ್ಪ ಅವರ ಮನದಾಳದ ನೋವು ಕವನದಲ್ಲಿ ಪ್ರಾಸಬದ್ದವಾಗಿ ಅನುಭವಿಸಿ ಬರೆದಿದ್ದಾರೋ ಎನ್ನುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಅಭಿನಂದನೆಗಳು

Share
Published by
SHANKAR G

Recent Posts

ಇದೇ ಭಾನುವಾರ ಕೊಪ್ಪಳದಲ್ಲಿ ಕವಿ ಚನ್ನಪ್ಪ ಅಂಗಡಿ ಅವರ “ಇನ್ನು ಕೊಟ್ಟೆನಾದೊಡೆ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.

ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…

55 years ago

ಕೊಪ್ಪಳದಲ್ಲಿ 2024ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ

ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…

55 years ago

ದೇವೇಂದ್ರ ಕಟ್ಟಿಮನಿ ಅವರ ಗಜಲ್ ಗಳಲ್ಲಿ ಕ್ರೀಡಾ ಮನೋಭಾವ; ಡಾ. ಮಲ್ಲಿನಾಥ ಎಸ್. ತಳವಾರ

ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…

55 years ago