ಗೋಡೆಯ ಮೇಲಿನ ದೇವರ ಚಿತ್ರ
ನಗುತಿದೆ ಎಂದಿನ ಹಾಗೇ ಇಂದು
ನಕ್ಕರೂ ನಗುವದು ಅತ್ತರೂ ನಗುವದು
ಅರಿಯೆನು ಏತಕೆ ಹೀಗಿದೆ ನಿರ್ಭಾವ
ನೋಡಿದ ಕೂಡಲೆ ಒಳಗಿನ ಮನವಿದು
ಬೇಡುತ ಇರುವದು ನೂರೊಂದು
ಕೊಟ್ಟರು ಬಿಟ್ಟರೂ ಕಡಿಮೆ ಆಗದು
ಕೇಳುವ ವ್ಯಾಧಿಯು ಎಂದೆಂದೂ
ತೃಪ್ತಿಯ ಭಾವದಿ ಮರತೆ ಬಿಡುವದು
ಗೋಡೆಯ ಮೇಲೆ ಪಟವೊಂದಿದೆ ಎಂದು
ದುಃಖವು ಮೂಡಲು ಹೇಳದೆ ಕಣ್ಣಿದು
ಅತ್ತಲೇ ನೋಡಲು ಕಲಿತಿದೆ ಏಕೆಂದು
ಎಷ್ಟೊಂದಿವೆ ಹಾಗೆ ಉಳಿದಿಹ ಪ್ರಶ್ನೆಗಳು
ಉತ್ತರ ಸಿಗದೆ ಆಲದಮರದ ಬಿಳಲಂತೆ
ಅಪ್ಪನು ಅಮ್ಮನು ನಂಬಿದ ಗುರುಗಳು,
ಕೊಟ್ಟಿಹ ಉತ್ತರ ಸುಳ್ಳಿನ ಸುಳಿಯಂತೆ !
ನಂಬಿಕೆ ಕರಗದು ಹಾಗೆ ಉಳಿಯದು
ಕರಗುವ ಮೊದಲು ಏನೋ ನಡೆವುದು
ಯತ್ನವು ನಾನೋ ಕಾರಣ ನೀನೊ
ಹೇಳದೇ ಪಟದಲಿ ದೇವ ನಗುತಿಹನೋ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ಸೂಪರ
ಸೊಗದಾಗಿದೆ.
ಗೊಡೆಗಂಟಿದೆ ನಂಬಿಕೆಯ ನಂಟು
ನಕ್ಕಾಗ ಸೊತಾಗ ಬರವಸೆ ಅಲ್ಲುಂಟು
ಕವನದೊಳಗಿನ ಪ್ರತಿ ಪದವೂ ಅರ್ಥಪೂರ್ಣ.
ಚೆನ್ನಾಗಿದೆ!
ಗೋಡೆಯ ಪಟ
ಅದರಲ್ಲಿದೆ ನಂಬಿಕೆ ದಿಟ
ದೇವರು ಒಳಗಿದ್ದರೂ
ಹೊರ ಹುಡುಕುವ ತಹ ತಹ
ನೂರು ಪ್ರಶ್ನೆ
ಎದೆಯ ಗೂಡೊಳಗೆ
ನಗುವನಲ್ಲ ಎಂಬ ಅನಿಸಿಕೆ
🙏🙏