ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಸದ್ದಡಗಿಸಿದ ಈ ಉಸಿರು ಹಾಗೆ ಇದೆ
ಶಬ್ಧಗಳೆಲ್ಲ ಹಾರಾಡುತ್ತಿವೆ ಹಕ್ಕಿಗಳಂತೆ
ಹುಟ್ಟು ಸಾವಿನ ನೆರಳಲ್ಲಿ
ಗುದುಮುರುಗಿ ಗೀತ ಸಾಗುತ್ತಿದೆ
ಯಾವುದೇ ಅಡೆತಡೆಯಿಲ್ಲದೇ
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಬಟ್ಟೆಗಳೆಲ್ಲ ಶಾಪದ ಮೂಟೆ ಹೊತ್ತಿವೆ
ಪಾದಗಳೊ ಬಿರುಕುಗಳ ಕಾಳಗದಲ್ಲಿ ನರಳುತ್ತಿವೆ
ಕಾಲ್ಮರಿಯ ಚೀಮಾರಿಗೊ
ಬೂಟಿನೇಟಿಗೊ
ಒಂಟೆಸಳ ಬಳ್ಳೊಳ್ಳಿ ಬಿಕ್ಕುತ್ತಿದೆ
ಸಂತೆ ಸಂತೆಗೊ ಅದೆಷ್ಟು ಅಂತರ
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ನಿರಾಳ ಮೂಖಗಳ ಹಸಿವು ನೀಗಲೆಂದು
ತಾಪತ್ರಯದ ಚಂದಿರನನ್ನು ಹೂತು
ಮಣ್ಣ ಮೌನವ ಧರಿಸಿದ ಕೆರೆಯ ಒಡಲ ಕರೆಗೆ ಓಗೊಟ್ಟು
ಹರಿದೆಸೆದಿದ್ದೇನೆ ಈ ತುಣುಕು ಚರ್ಮವನ್ನ
ಯಾವ ಹಾದಿಯ ಸುಣ್ಣ ಬಣ್ಣ ಅಪ್ಪಿಕೊಳ್ಳುವುದೆಂದು
ಕಾತರದ ನೀಲಗಿರಿಯ ಕೊರಳು ಚಾಚುವುದೆಂದು
ಮಟ ಮಟ ಮಧ್ಯಾಹ್ನದ ನೆತ್ತಿ ಅರಳುವುದೆಂದು
ಮಾತಿಲ್ಲದೆ ಎದೆಗುಂಟ ಹಬ್ಬಿರೊ ಗೋರಿಗಳ ಹೂವಿನ ನಿರಾಳತೆಗೆ ಶರಣಾಗಿ
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…