ನನ್ನಮ್ಮನಿಗೆ
ಅದೆಂಥದ್ದೂ…ಮರಳು
ನಾ ಅವಳ
ಬದುಕ ಬರಹವಾಗಿಸಬೇಕಂತೆ…
ಬಯಲಾದ ಪದಗಳಲಿ
ಅವಳು ಕುಣಿಯುತ್ತಾಳಂತೆ..
ಅವಳೆದುರಿಗೆ ನನ್ನದೊಂದೇ
ಪ್ರಶ್ನೆ..
ಅಕ್ಷರಗಳಿಗೆ ನಿಲುಕದಂತೆ
ಜೀವಿಸಿದ ನಿನ್ನ
ಅದ್ಯೇಗೆ ಬಂಧಿಸಲಿ..
ನೀ ತೊಡದ ಒಡವೆಯಲಿ
ಅದ್ಯೇಗೆ ನಿನ್ನ ಸಿಂಗರಿಸಲಿ..
ಏ ಅಮ್ಮಾ
ಅನಕ್ಷರಸ್ಥಳು…ನಾನು
ನಿನ್ನ ಅನಂತ
ಬದುಕಿನೆದುರಿಗೆ
ವರ್ಣಮಾಲೆಗಳೇ ಇಲ್ಲ
ಅಲ್ಲಿ ಪದವಿಲ್ಲಾ
ಕ್ಷಯವಾಗುವ ಅಕ್ಷರಗಳಿಲ್ಲಾ..
ಏ ಅಮ್ಮಾ
ಕತ್ತಲನ್ನೆ ಹಗಲಾಗಿಸಿ
ಕಾಯವನ್ನೆ ದೀವಿಗೆಯಾಗಿಸಿ
ಪೊರೆದವಳ..
ಬಾಳ…ಚಿತ್ರವ
ರಚಿಸಲಾದೀತೇ…
ಗಡಿಗಳೇ ಇಲ್ಲದ
ಈ ರೇಖಾ ಚಿತ್ರವ..
ಚಿತ್ರಿಸಲಾದೀತೆ..,
ಕ್ಷಮಿಸಿ ಬಿಡೇ ಅಮ್ಮಾ
ನಿನ್ನ ಕೂಸಿಗೆ
ಮಡಿಲ ಮರೆಯಲಿ
ಮಿಯ್ಯುವುದು ತಿಳಿದಷ್ಟು
ಬಯಲಾಗುವ ಪರಿ ತಿಳಿದಿಲ್ಲ ಕಣೇ..
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…
View Comments
ನಿಸ್ವಾರ್ಥ ಕರುಣಾಮಯಿ ಅಮ್ಮನ ಕವಿತೆ ಬಹುಶ ಎಷ್ಟೇ ವರ್ಣಿಸಿದರು ವರ್ಣಿಸಲು ಪದಗಳು ಸಾಲದು ಆ ಜೀವಕ್ಕೆ.... Thanku.. 🌹🌹
ವ್ಹಾವ್ ಮನಕದಡಿದ ಸಾಲುಗಳು... ಅಮ್ಮನ ಕವಿತೆ ಯಾರೇ ಬರೆದರೂ,ಹೇಗೆ ಬರೆದರೂ ಚೆಂದ
ಚೆಂದದ ಕವಿತೆ... ಅಭಿನಂದನೆಗಳು ಆಶಾ ಅವರಿಗೆ