ಅಹಂಕಾರದ ಮಾಯೆ ಈ ಕಾಯ,
ಗತ್ತಿಂದ ಬೀಗ ಬೇಡ,ತಾತ್ಕಾಲಿಕ ಈ ಕಾಯ,
ಅತಿ ಸೂಕ್ಷ್ಮ,ನಿಗೂಢ ಮಣ್ಣ ಈ ಕಾಯ.
ಮಣ್ಣ ಧೂಳು ಕಣ,ಈ ಕಾಯ,
ಜೋರು ಗಾಳಿ ಬೀಸಿದರೆ,ತಪ್ಪುವುದು ಆಯ,
ಮಣ್ಣಲ್ಲಿ ಮಣ್ಣಾಗುವ,ಧೂಳು ಕಣ ಕಾಯ,
ಮಣ್ಣಾಗುವ ಮುನ್ನ,ಎಚ್ಚರ ಕಣೋ ಕಾಯ,
ಇದ್ದಾಗ ನಾನು ನನ್ನದೆಂದು ಎದೆಗಪ್ಪುವರು,
ಸತ್ತಾಗ ಅತ್ತು ಎದೆಗಪ್ಪಿ,ಮಣ್ಣು ಮಾಡುವರು,
ಜೊತೆಗಾರೂ ಬರಲ್ಲ,ನಿನ್ನದೆಲ್ಲಾ ನಂದೆನ್ನುವರು,
ಮೂರು ದಿನ ಶೋಕವೆಂದು,ಮರೆವರು
ಕಾಯವೆಂಬ ಕೆಡುವ ಕ್ಷೀರಕೆ, ಪ್ರೀತಿ ಭಕ್ತಿಯ
ಹನಿ ಮಜ್ಜಿಗೆ,ಸೇರಿಸಿ,ಸೇವೆಯ ಕಡಗೋಲಿಂದ
ಆಧ್ಯಾತ್ಮವೆಂಬ ಬೆಣ್ಣೆಯನು ಕಡೆದು,
ಸಾಧನೆಯ ಬೆಂಕಿಯಲಿ ಸಂಸ್ಕರಸಿ,
ಕಾಯತ್ಮ ಶುದ್ಧಿಗೊಳಿಸೋ ಖಾದರ ಲಿಂಗ
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
ಬೆಣ್ಣೆ ಬೆಂಕಿ ಕಾಯತ್ಮ ಶುದ್ದಿಕರಣ. ಜೀವನದ ಸತ್ಯ ದರ್ಶನ ಮಾಡಿಸುವ ಬಿಂಬ. ಖಾದರ್ ಗೀಚಿದರೆ ಅದಕ್ಕೆ ಖದರ್ರೆ ಬೇರೆ. ಅವರ ಸಾಹಿತ್ಯದಿಂದ ಸತ್ಯ ದರ್ಶನದ ಹಲವಾರು ಗದ್ಯ ಪದ್ಯ ಬರೆದು ಒಂದು ಸಾಮಾಜಿಕ ಕನ್ನಡಿಯಂತೆ ಭಾಸವಾಗುತ್ತದೆ. ಅವರಿಗೆ ಶುಭವಾಗಲಿ