ಮದುವೆಯಲಿ ನೆರೆದಿಹರು ಜನರು ಸಾವಿರದೆಂಟು
ಹೊಸ ಕನಸುಗಳ ಮೆರಗು ನವಜೋಡಿಗಳಲುಂಟು
ನೋವು ನಲಿವು ನೂರೆಂಟು
ಒಂಟಿತನಕೆ ಕೊನೆಹೇಳುವ ಬಂಧ ಇಲ್ಲುಂಟು
ಗಂಡು ಕಟ್ಟುವನು ಹೆಣ್ಣಿಗೆ ಮೂರು ಗಂಟು
ಏಳೇಳು ಜನುಮದ ಅನುಬಂಧದ ನಂಟು
ಪ್ರೀತಿ ಪ್ರೇಮ ಸ್ನೇಹ ನಂಬಿಕೆ ಉಂಟು
ಮನಸುಗಳು ಅರಿತರೆ ನೆಮ್ಮದಿಯುಂಟು
ಬದುಕಲಿ ಕಷ್ಟ ಸುಖದ ತಿರುವುಂಟು
ಅರಿತು ನಡೆದರೆ ಜೀವನದಲ್ಲಿ ಸೊಗಸುಂಟು
ಹೊಂದಾಣಿಕೆ ಇದ್ದರೆ ಬಾಳಲಿ ಸಾಮರಸ್ಯವುಂಟು
ಸಮರಸದ ಸಂಗೀತ ಮದುವೆ ಎಂಬ ಬಂಧನದಲುಂಟು
ಸಂಬಂಧವಾಗದಿರಲಿ ಕಗ್ಗಂಟು
ನೆಮ್ಮದಿಯ ಬದುಕಲ್ಲಿ ಹಿತವುಂಟು
ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…