ಕತೆಗಳು

ಸುವರ್ಣಾ ಭಟ್ಟ ಶಿರಸಿ ಅವರು ಬರೆದ ಕತೆ ‘ವೃತ್ತಿ’

ರಜನಿ ಇಂದು ಭಾನುವಾರ. ಇವತ್ತಾದರೂ ಮನೆಯಲ್ಲಿ ಇದ್ದು ನನ್ನ ಜೊತೆ ದಿನ ಕಳೆಯ ಬಹುದಲ್ಲ ಮಗಳೇ, ಎಂದು ತಾಯಿ ಸರಸ್ವತಿಯವರು ಹೇಳಲು, ಅಮ್ಮ! ನನಗೂ ನಿಮ್ಮ ಜೊತೆ ಇರಲು ಇಷ್ಟ!. ಆದರೆ?? ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ವೃತ್ತಿಯಿಂದ ಹಿಂದೆ ಸರಿಯಲಾಗದು. ಈಗ ನನ್ನ ಕರ್ತವ್ಯ ನಿಭಾಯಿಸಲು ಕರೆ ಬಂದಿದೆ. ನಾನು ವೈದ್ಯೆಯಾಗಿ ರೋಗಿಗಳಿಗೆ ಶುಶ್ರೂಷೆ ಮಾಡಲು ಸದಾ ಸಿದ್ಧವಿರಬೇಕು.

ಸೇವೆ ಮಾಡು ಮಗಳೆ ಆದರೆ, ನನಗೂ ಮಗಳ ಜೊತೆ ಕಾಲ ಕಳೆಯ ಬೇಕೆಂಬ ಆಸೆ ಇರುವುದಿಲ್ಲವ?. ನೀನೇ ಹೇಳು. ಹಾಗೇಯೇ ನೀನು ಸಹ ಒಂಟಿಯಾಗಿ ಎಷ್ಟು ದಿನ ಕಾಲ ದೂಡುವೆ. ನನಗೆ ವಯಸ್ಸಾಯ್ತು ನಿನಗೆ ವರ್ಷ ಮೂವತ್ತಾಯಿತು. ನಿನ್ನ ಗೆಳತಿಯರು ಮದುವೆಯಾಗಿ ಗಂಡನ ಮನೆಯಲ್ಲಿ ಆರಾಮವಾಗಿ ಇದ್ದಾರೆ. ಅವರನ್ನು ನೋಡಿದಾಗ ನನ್ನ ಮಗಳಿಗೂ ಒಬ್ಬ ಸಂಗಾತಿ ಸಿಗಲಿ ಎಂದು ಯೋಚಿಸುವುದು ತಪ್ಪಾ! ಎಂದರು.

ಅಮ್ಮಾ! ಸುಮ್ಮನೆ ಏನೇನೋ ಮಾತನಾಡಿ ನನ್ನ ಸಮಯ ವ್ಯರ್ಥ ಮಾಡ್ತ ಇದ್ದಿಯಾ ನೀನು. ನನಗೆ ಎಮರ್ಜೆನ್ಸಿ ಡೆಲಿವರಿ ಕೇಸ್ ಬಂದಿದೆ. ಆಸ್ಪತ್ರೆಯಿಂದ ‘ಸಿನೀಯರ್ ಡಾಕ್ಟರ್ ಕಿರಣ್’ ಫೋನ್ ಮಾಡಿ ಬರಲು ಹೇಳಿದ್ದಾರೆ. ನಾನು ಹೋಗಲೆ ಬೇಕಮ್ಮ!. ‘ಪ್ಲೀಸ್ ‘ ನನ್ನ ಹೋಗಲು ಬಿಡು. ಅವರು ನನಗಾಗಿ ಕಾಯುತ್ತಿದ್ದಾರೆ. ಎರಡು ಜೀವ ಉಳಿಸುವ ಜವಾಬ್ದಾರಿ ನಾನು ಹೊತ್ತಿರುವೆ. ಮದುವೆ ಮಾತು ಕತೆ , ನಿನ್ನ ಜೊತೆ ಜಗಳ ನಾಳೆ ಮಾಡುವೆ. ಸಾರೀ ಮ್ಮಾ, ಬಾಯ್ ಎಂದು ತನ್ನ ವೃತ್ತಿಯ ಕಡೆ ಮುಖಮಾಡಿ ಹೊರಟಳು ರಜನಿ.

“ರಜನಿ ಗೈನಕಾಲಜಿಸ್ಟ್. ಆಸ್ಪತ್ರೆಯಲ್ಲಿ ಎಲ್ಲ ಸಹೋದ್ಯೋಗಿಗಳು ಹಾಗೂ ರೋಗಿಗಳ ಜೊತೆ ಆತ್ಮೀಯವಾಗಿ ಮಾತನಾಡುತ್ತಿದ್ದಳು. ಜಗಳ , ಗಲಾಟೆಯಿಂದ ದೂರವಿದ್ದು ತನ್ನ ಕೆಲಸದ ಕಡೆ ಮಾತ್ರ ಗಮನ ಹರಿಸುತ್ತಿದ್ದಳು. ಮಕ್ಕಳಾಗದ ದಂಪತಿಗಳ ಜೊತೆ ಮುಕ್ತವಾಗಿ ಮಾತನಾಡಿ ವಿಶ್ವಾಸ ಮೂಡಿಸಿ ಹಲವಾರು ತಾಯಂದಿರ ಮಡಿಲಲ್ಲಿ ಮುದ್ದು ಕಂದನ ನಗುವ ನೋಡುವಂತೆ ಮಾಡಿದ್ದಳು. ಮನೆಯಲ್ಲಿ ಹಣದ ಕೊರತೆ ಇದ್ದ ರೋಗಿಗಳಿಗೆ ತಾನೇ ತನ್ನ ಸಂಬಳದ ಹಣವ ಅವರಿಗೆ ನೀಡುತ್ತಿದ್ದಳು. ರೋಗಿಗಳ ಶುಶ್ರೂಷೆ ಮಾಡುತ್ತಾ! ಅವರ ಸೇವೆ ಮಾಡುವ ವೃತ್ತಿಯಲ್ಲಿ ಖುಷಿಯ ಕಂಡುಕೊಂಡಿದ್ದಳು”.

‘ಡಾಕ್ಟರ್ ಕಿರಣ್ ‘ರಜನಿ ಬರುವಿಕೆಗಾಗಿ ಬಾಗಿಲಲ್ಲಿ ನಿಂತು ಕಾಯುತ್ತಿದ್ದರು. ರಜನಿ ಬಂದ ತಕ್ಷಣ ಕಿರಣ್ ರೋಗಿಯ ಕಂಡಿಷನ್ ವಿವರಿಸಿ ಅವಳ ಜೊತೆ ಆಪರೇಷನ್ ಥಿಯೇಟರ್ ಕಡೆ ನಡೆದರು. ಹೊರಗಡೆ ಕುಳಿತ ಪೆಷೇಂಟಿನ ಮನೆಯವರಿಗೆ ಧೈರ್ಯ ತುಂಬಿ ರಜನಿ ಒಳ ನಡೆದಳು. ಕೆಲ ಹೊತ್ತಿನ ನಂತರ ಹೊರಗಡೆ ಬಂದು ತಾಯಿ ಮಗು ಇಬ್ಬರು ಕ್ಷೇಮವಾಗಿರುವರು ಎನ್ನುತ್ತಾ! ಮುದ್ದಾದ ಮಗುವನ್ನು ಮನೆಯವರ ಕೈಗೆ ನೀಡಿದಳು. ಆಪರೇಷನ್ (ಸಿಸೇರಿಯನ್) ಮಾಡಿ ಮಗುವನ್ನು ತೆಗೆದಿರುವುದರಿಂದ ಐದು ದಿನಗಳ ಕಾಲ ತಾಯಿಯ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಹೇಳಿ, ಅವಳಿಗಾಗಿ ಕಾದು ಕುಳಿತ ಕೆಲವು ಗರ್ಭಿಣಿಯರ ಪರೀಕ್ಷಿಸಲು ಹೊರಟಳು.

ರಜನಿ ಸಂಜೆ ನಾಲ್ಕು ಘಂಟೆಯ ಸುಮಾರಿಗೆ ಡಾಕ್ಟರ್ ಕಿರಣ್ ಅವರಿಗೆ ತಿಳಿಸಿ ಮನೆಯ ದಾರಿ ಹಿಡಿದಳು.ಮನೆಗೆ ಬಂದವಳು ತಾಯಿಯ ಮಂಕಾದ ಮುಖವ ನೋಡಿ ಅವರ ಜೊತೆ ಮಾತನಾಡಿ ಅವರ ಇಚ್ಛೆಯಂತೆ ಮುಂದಿನ ಭಾನುವಾರ ಅವರು ಹುಡುಕಿರುವ ಹುಡುಗನ ನೋಡಲು ಒಪ್ಪಿಗೆ ಸೂಚಿಸಿದಳು. ಸರಸ್ವತಿಯವರು ಖುಷಿಯಿಂದ ಮಗಳ ಬಾಯಿಗೆ ಸಕ್ಕರೆ ತಿನ್ನಿಸಿದರು.

“ಅಂದು ಭಾನುವಾರ ಸರಸ್ವತಿಯವರು ಮಗಳಿಗೆ ರೇಷ್ಮೆ ಸೀರೆ ಉಡಿಸಿ ಸಿಂಗಾರ ಮಾಡಿದ್ದರು. ಹನ್ನೊಂದು ಘಂಟೆಯ ಸುಮಾರಿಗೆ ಗಂಡಿನ ಕಡೆಯವರು ಬಂದು ಹುಡುಗಿ ನೋಡುವ ಶಾಸ್ತ್ರ ಮಾಡಿದರು. ಹುಡುಗಿ ನಮಗೆ ಒಪ್ಪಿಗೆ ಇದೆ ಆದರೆ ನಮ್ಮದೊಂದು ಕಂಡಿಷನ್ ಇದೆ. ಅದಕ್ಕೆ ನೀವು ಒಪ್ಪುವುದಾದರೆ ಮದುವೆಗೆ ನಾವು ಸಿದ್ಧ ಎಂದರು ಹುಡುಗನ ತಾಯಿ. ಸರಿ ನಿಮಗೆ ವರದಕ್ಷಿಣೆ ಕೊಡಲು ನಾನು ಸಿದ್ಧ ಎಂದರು ಸರಸ್ವತಿ”.

“ವಿಷಯ ಅದಲ್ಲ ಸರಸ್ವತಿಯವರೇ, ನಮ್ಮ ಮನೆಯ ಸೊಸೆ ಕೆಲಸಕ್ಕೆ ಹೋಗುವುದು ನಮಗೆ ಇಷ್ಟವಿಲ್ಲ. ಮದುವೆಯ ನಂತರ ರಜನಿ ಕೆಲಸಕ್ಕೆ ರಾಜೀನಾಮೆ ನೀಡಬೇಕು ಮತ್ತು ತಾಯಿ ಒಬ್ಬಳೆ ಎಂದು ನಿಮ್ಮನ್ನು ನಮ್ಮ ಜೊತೆ ನಮ್ಮ ಮನೆಯಲ್ಲಿ ಇರಿಸಿಕೊಳ್ಳಬಾರದು ಎಂದರು ವರನ ತಾಯಿ. ಇವರ ಮಾತುಗಳ ಕೇಳಿದ ರಜನಿಯ ಮುಖ ಕೋಪದಿಂದ ಕೆಂಪಾಯಿತು. ನನಗೆ ಈ ಮದುವೆ ಇಷ್ಟವಿಲ್ಲ. ನಿಮ್ಮ ಮಗನ ಮದುವೆಯಾಗಿ ಸಂಸಾರ ಬಂಧನದಲ್ಲಿ ಒದ್ದಾಡಲು ಹುಟ್ಟಿರುವ ಹೆಣ್ಣು ನಾನಲ್ಲ. ನಾನು ಇಷ್ಟ ಪಟ್ಟ ವೃತ್ತಿ ಹಾಗೂ ನನ್ನ ಹಡೆದವ್ವ ನನ್ನೇರಡು ಕಣ್ಣುಗಳು. ಕೆಲಸವೇ ನನ್ನ ಸಂಗಾತಿ ತಾಯಿ ನನ್ನ ದೇವರು ನಾನು ಇವೆರಡನ್ನೂ ತುಂಬಾ ಪ್ರೀತಿಸುವೆ. ನೀವು ಹೊರಡ ಬಹುದು ಎಂದು ತಾಯಿ ಮಾತನಾಡುವ ಮುನ್ನವೇ ತನ್ನ ಅನಿಸಿಕೆ ತಿಳಿಸಿದಳು ರಜನಿ”.

ತನ್ನ ವೃತ್ತಿ ಮತ್ತು ಹೆತ್ತ ತಾಯಿಯ ಪ್ರೀತಿಸುವ ರಜನಿ ಮದುವೆ ಎಂಬ ಸಂಸಾರದ ಬಂಧನದಿಂದ ದೂರವಾಗಿ ತನ್ನ ಕೆಲಸದಲ್ಲಿ ಖುಷಿಯ ಕಂಡಳು.

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago