ಕತೆಗಳು

ರಾಘವೇಂದ್ರ ಪಟಗಾರ ಯಲ್ಲಾಪುರ ಅವರು ಬರೆದ ಕತೆ ‘ಒಂದು ಮೊಬೈಲ್ ಪುರಾಣ”

ಸುಕನ್ಯಾ ಹೆಸರಿಗೆ ತಕ್ಕಂತೆ ಸುಸಂಸ್ಕೃತಳು, ಚಂದದ ಚೆಲುವೆ. ಒಮ್ಮೆ ನೋಡಿದರೆ ಮತ್ತೊಮ್ಮೆ ತಿರುಗಿ ನೋಡೊ ತರ ಇದ್ದವಳು. ಆದರೆ ತನ್ನ ಸೌಂದರ್ಯದ ಬಗ್ಗೆ ಹೆಮ್ಮೆ ಇತ್ತೇ! ವಿನಃ, ಅಹಂ ಇರಲಿಲ್ಲ. ತಂದೆ – ತಾಯಿಯ ಮುದ್ದಿನ ಮಗಳು. ತನ್ನ ಇಷ್ಟದ ಎಂಬಿಎ ಕೋರ್ಸಗೆ ಸೇರಿದ್ದಳು. ಇವಳಿರೋ ಊರಲ್ಲಿ ಈ ಕೋರ್ಸ ಇರದ ಕಾರಣ ದೂರದ ಮಧುಗಿರಿಗೆ ಬಂದು ಅಲ್ಲಿನ ಪ್ರತಿಷ್ಠಿತ ಕಾಲೇಜಿಗೆ ಸೇರಿದ್ದಳು. ಈ ಊರಲ್ಲಿ ಸಂಬಂಧಿಕರು ಯಾರೂ ಇಲ್ಲದ ಕಾರಣ ಪಿ.ಜಿ ಯಲ್ಲಿದ್ದಳು. ಓದಿನಲ್ಲಿ ಮುಂದಿದ್ದ ಸುಕನ್ಯಾ ಮಿತ ಭಾಷಿಯಾಗಿದ್ದಳು. ಹೀಗಿರಲು ರೂಂ ಮೇಟ್ ನ ಬಳಿ ಹೊಸ ಮೊಬೈಲ್ ಇರೋದನ್ನು ಗಮನಿಸಿ ವಾವ್ಹ್..! ಚೆನ್ನಾಗಿದೆ ಎಂದಳಾಕೆ. ಹಾಂ.. ಇಷ್ಟ ಆಯ್ತಾ?

ಸುಕನ್ಯಾ – ಹೌದು ಕಣೇ

ಗೆಳತಿ – ನೀನು ತಕೋ.

ಸುಕನ್ಯಾ – ಆಗಲ್ಲಾ ಕಣೆ. ನಾವು ಮಿಡ್ಲ ಕ್ಲಾಸ್ ನವರು ನಂಗೆ ಓದೋಕೆ ಕಳಿಸಿದ್ದೇ ಹೆಚ್ಚು. ಪಾಪ ನನ್ನಪ್ಪ ಹೇಗೊ ಬರೋ ಆದಾಯದಲ್ಲೇ ಓದಿಸ್ತಾ ಇದ್ದಾರೆ. ಹೋಗಲಿ ಬಿಡು. ನಾನೇ ಚೆನ್ನಾಗಿ ಓದಿ, ನೌಕರಿ ಮಾಡೋವಾಗ ತಕೋಂಡ್ರೆ ಆಯ್ತು.

ಗೆಳತಿ – ಸರಿ ಸರಿ , ಎನ್ನುತ್ತಾ ಮೊಬೈಲ್ ರಿಂಗ ಆದೊಡನೆ ಅಲ್ಲಿಂದ ಕಾಲ್ಕಿತ್ತಳು.

ಸುಕನ್ಯಾ ಗೆಳತಿ ಹೋಗೊದನ್ನೆ ಮರೆಯಾಗುವವರೆಗೂ ನೋಡುತ್ತಿದ್ದಳು . ಗೆಳತಿಯ ಮಾತು ಅವಳಿಗೆ ಕಾಡತೊಡಗಿತು. ಓದುವ ಕಡೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ ಅವಳಿಗೆ. ಯೋಚಿಸಿ ಯೋಚಿಸಿ ತಲೆ ನೋವಿನಿಂದ ಸ್ಪಲ್ಪ ಹೊತ್ತು ಮಲಗಿದಳು. ನಿದ್ರೆ ಮಾತ್ರ ಸುಳಿಯಲಿಲ್ಲ. ಆವಾಗಲೇ ಪಿ.ಜಿ ಓನರ್ ಕರಿತಾ ಇದ್ದಾರೆ ಬರಬೇಕಂತೆ ಅಂತ ಓನರ್ ರ ಮಗ ರಾಜು ಬಂದು ಕರೆದಾಗ , ಸರಿ ಬಂದೆ ಅಂತ ಹೋದ ಸುಕನ್ಯಾಳಿಗೆ ಮನೆ ಓನರ್ ಸಹ ನೀನು ಮೊಬೈಲ್ ತಕೋ ಅಮ್ಮಾ ನಿನ್ನ ತಂದೆ-ತಾಯಿ ಆವಾಗಲೇ ಕಾಲ್ ಮಾಡಿದ್ರು ನಾನು ಹೊರಗಡೆ ಇದ್ದೆ, ಪಾಪ ಅವರಿಗೆ ನಿನ್ನ ಜೊತೆ ಮಾತಾಡ್ಬೇಕು ಅಂತಿದ್ರು. ನನ್ನ ಮೊಬೈಲ್ ನಂಬಿದ್ರೆ ಕಷ್ಟ ನಾನು ಬಿಸಿನೆಸ್ ಅಂತಾ ಬೇರೆ ಕಡೆ ಹೋದ್ರೆ ಮಾತನಾಡೋಕೆ ಆಗಲ್ಲಾ ಅಲ್ವಾ?. ನಿಜ ಅಂಕಲ್ ನಿಮ್ಮ ಮಾತು ಸರಿ, ಅಪ್ಪನಿಗೆ ಹೇಳಿ ನೋಡ್ತೆ. ಸರಿ ತಕೋ ಮಾತಾಡು ಅಂತ ಮೊಬೈಲ್ ಕೊಟ್ರು ಅಂಕಲ್. ಮೊಬೈಲ್ ಪಡೆದು ಸುಕನ್ಯಾ ಅಪ್ಪನ ಮೊಬೈಲ್ ಗೆ ಕಾಲ್ ಮಾಡಿ ತುಂಬಾ ಹೊತ್ತು ಮಾತನಾಡಿ ಅಂಕಲ್ ಗೆ ವಾಪಸ್ ನೀಡಿದಳು. ಅವಳ ಮನಸ್ಸು ಭಾರವಾಗಿತ್ತು. ತುಂಬಾ ಪ್ರೀತಿ ಮಾಡೊ ಅಪ್ಪ – ಅಮ್ಮನ ನೆನೆದು ಕಣ್ಣಿನಿಂದ ಹನಿ ಹನಿಯಾಗಿ ನೀರು ಬರುತಿತ್ತು. ತಲೆ ಭಾರವೆನಿಸಿ ಮಲಗಿದಳಿಗೆ ನಿದ್ದೆ ಹತ್ತಿದ್ದೆ ಗೊತ್ತಾಗಲಿಲ್ಲ.

ಯಾರೋ ಕದ ತಟ್ಟಿದ ಶಬ್ದದಿಂದ ಎದ್ದ ಸುಕನ್ಯಾ, ಬಾಗಿಲು ತೆಗೆದಳು ಅವಳ ಕಣ್ಣುಗಳು ನಂಬಲಾದಳು ..!? ಎದುರಿಗಿದ್ದವರನ್ನು ಕಂಡು. ಅವಳು ತುಂಬಾ ಸಂತೋಷಗೊಂಡಿದ್ದಳು ಅವರಿಬ್ಬರನ್ನು ನೋಡಿ. ಅಪ್ಪಾ…..! ಅಮ್ಮಾ……! ಇಬ್ಬರನ್ನೂ ಬಿಗಿದಪ್ಪಿ ಅತ್ತಳು. ಅಮ್ಮನು ಕೂಡಾ ಅಳುವುದನ್ನು ನೋಡಿ ಸುಕನ್ಯಾ: ಅಪ್ಪ ಏನ್ರೇ? ನೀವು ಹೀಗೆ ಅಳುತ್ತಾ ಇರುತ್ತಿರಾ? ಅಂದಾಗ ಇಬ್ಬರೂ ಸಾವರಿಸಿಕೊಂಡು, ಅಪ್ಪ-ಅಮ್ಮ ಬನ್ನಿ ಒಳಗೆ ಕುಳಿತುಕೊಳ್ಳಿ. ಇದೇನು..? ನೀವು ಈಗಷ್ಟೇ ಕಾಲ್ ಮಾಡಿ ಊರಿಂದನೆ ಕಾಲ್ ಮಾಡ್ತಾ ಇದ್ರಿ ಅಂತ ಹೇಳಿದ್ರಿ..? ಹೌದು ಮಗಳೆ ನಿನಗೆ ಸರ್ಪ್ರೈಸ್ ಕೊಡೊಣಾ ಅಂತಾ ಹಾಗೆ ಅಂದಿದ್ದು ಅಂದಾಗ, ಅಮ್ಮ ನೋಡಿದ್ರಾ..? ನಾನು ಹೇಳಿದ್ದೆ ನಿಮಗೆ ಪಾಪ ಅವಳಿಗೆ ಹೇಳಿಕೊಂಡು ಬರೋಣಾ ಅಂತಾ ಪಾಪ ಅವಳ ಮುಖ ನೋಡಿ ಎಂದು ಸುಕನ್ಯಾಳ ಅಮ್ಮಾ ಹೇಳಿದರು. ಇರಲಿ ಬಿಡಮ್ಮ ನೀವಿಬ್ಬರೂ ಬಂದಿದ್ದು ತುಂಬಾ ಸಂತೋಷವಾಯಿತು, ನಿಮ್ಮನ್ನು ನೋಡ್ಬೇಕು ಅಂತ ಆಸೆಯಾಗಿತ್ತು. ಬನ್ನಿ ಕೈಕಾಲು ಮುಖ ತೊಳೆದುಕೊಂಡು ಬನ್ನಿ ಟೀ ಮಾಡಿ ಕೊಡುತ್ತೇನೆ. ಸರಿ ಕಣಮ್ಮ. ಎಂದು ಕೈಕಾಲು ಮುಖ ತೊಳೆದುಕೊಂಡು ಬಂದರು, ಅಷ್ಟರಲ್ಲಿ ಸುಕನ್ಯಾ ಟೀ ಮಾಡಿ ಬೇಕರಿಯಿಂದ ತಂದಿದ್ದ ತಿಂಡಿ ಕೊಟ್ಟಳು. ಅಮ್ಮ-ಅಪ್ಪ ಟೀ ಕುಡಿಯುತ್ತಾ ಊರಿನ ವಿಷಯವನ್ನು ತಿಳಿಸುತ್ತಾ, ಏ… ಸುಕನ್ಯಾ ಅಂದಾಗ..

ಸುಕನ್ಯಾ ಕಿಟಾರನೆ…….. ಕೂಗಿ ಒಮ್ಮೇಲೆ ಕಣ್ಣು ಬಿಟ್ಟು ಕುಳಿತಳು. ಇವಳ ಕೂಗು ಕೇಳಿ ಓಡಿ ಬಂದ ಇವಳ ಗೆಳತಿ ಏನೇ..!? ಸುಕ್ಕು ಯಾಕೆ ಕೂಗಿಕೊಂಡೆ? ಗೆಳತಿ ಸುಮಾ ಪ್ರೀತಿಯಿಂದ ಸುಕ್ಕು ಅಂತಾನೇ ಕರಿಯೋಳು ಸುಕನ್ಯಾಳಿಗೆ. ಸುಕನ್ಯಾಳು ಅಷ್ಟೇ ಸುಮಾಳನ್ನು ಸುಮಿ ಅಂತ ಕರಿಯೋಳು. ಸುಕನ್ಯಾಳಿಗೆ ಸಾವರಿಸಿಕೊಳ್ಳಲು ಸ್ವಲ್ಪ ಸಮಯವೇ ಹಿಡಿಯಿತು. ಗೆಳತಿ ಕೊಟ್ಟ ನೀರು ಕುಡಿದ ಸುಕನ್ಯಾ ಸಾವರಿಸಿಕೊಂಡು, ಅಪ್ಪ-ಅಮ್ಮ ಎಲ್ಲಿ? ಅಂತ ಗೆಳತಿಗೆ ಕೇಳಿದಳು. ಅಪ್ಪ-ಅಮ್ಮನಾ ಯಾವಾಗ ಬಂದಿದ್ರು..!? ಎಲ್ಲೋ ಕನಸು ಕಂಡಿರಬೇಕು, ಅಪ್ಪ-ಅಮ್ಮ ಬಂದಿಲ್ಲಾ ಕಣೇ ಎಂದು ಗೆಳತಿ ಹೇಳಿದಾಗ. ಸುಕನ್ಯಾ ಹಾಗಾದರೆ ಇಷ್ಟೊತ್ತು ಅನುಭವವಾಗಿದ್ದು ಕನಸಾ..? ಕನಸಲ್ಲಿ ಅಪ್ಪ-ಅಮ್ಮ ಬಂದಿದ್ರು ಕಣೆ. ಊರಿನ ವಿಷಯ ಹೇಳುತ್ತಾ ನಮ್ಮೂರಿನ ಶಂಕ್ರಣ್ಣನ ಮಗ ಶಿವು ನ ಸುದ್ದಿ ಹೇಳಿದ್ರು. ಒಬ್ಬನೆ ಮಗ ಚೆನ್ನಾಗಿರಲಿ ಅಂತ ಅವ ಕೇಳಿದ್ದು ಕೊಡಿಸ್ತಾ ಇದ್ರಂತೆ, ಒಂದು ತಿಂಗಳ ಹಿಂದೆ ಅಷ್ಟೇ ಹುಟ್ಟುಹಬ್ಬಕ್ಕೆ ಶಿವುಗೆ ಮೊಬೈಲ್ ಗಿಫ್ಟ್ ಮಾಡಿದ್ರಂತೆ. ಶಿವು ಮೊಬೈಲ್ ಗೀಳು ಹಚ್ಚಿಸಿಕೊಂಡು ಪಬ್ ಜೀ ಆಟ ಆಡುತ್ತಾ ಆಡುತ್ತಾ ಮೆಂಟಲ್ ಆಗಿ. ಮೊನ್ನೆ ಮೊಬೈಲ್ ಕೊಟ್ಟಿಲ್ಲಾ ಅಂತ ಸುಸೈಡ್ ಮಾಡಿಕೊಂಡನಂತೆ. ಅಂತ ಹೇಳಿದ ಹಾಗೇ ಇತ್ತು.

ಅಲ್ವೇ..!. ಸುಮಿ ಕನಸಲ್ಲಿ ನಂಗೆ ಹೀಗೆ ಏಕೆ ಕಾಣಿಸಿತು ? ನಾನೇನು,..! ಶಿವುನ ಬಗ್ಗೆ ವಿಚಾರನೇ ಮಾಡಿಲ್ಲಾ. ಏನೋ ಗೊತ್ತಿಲ್ಲಾ ಕಣೆ ಆದ್ರೆ ನಾ ನಿಂಗೆ ಬೆಳಿಗ್ಗೆ ಒಂದು ವಿಡಿಯೋ ಕಾಣಿಸಿದ್ದೆ ನೆನಪಿದೆಯಾ?  ಒಬ್ಬ ಹುಡುಗ, ಹುಡುಗಾ ಮೊಬೈಲ್ ತುಂಬಾ ಹೊತ್ತು ಆಟ ಆಡಿ ಬ್ರೈನ್ ಡ್ಯಾಮೇಜ್ ಆಗಿ ತೀರಿಕೊಂಡ ಅಂತ. ನನ್ನ ಪ್ರಕಾರ ನೀನು ಮೊಬೈಲ್ ಬಗ್ಗೆ ತುಂಬಾ ಚಿಂತೆ ಮಾಡ್ತಿದ್ದಿಯಾ ಅಂತ ಅನಿಸತ್ತೆ ಎಂದಳು ಸುಮಾ. ಇರಬಹುದು ಸುಮಿ, ಬೆಳಿಗ್ಗೆ ನೀ ಹೋದನಂತರ ಅಂಕಲ್ ಮೊಬೈಲ್ ಗೆ ಅಪ್ಪ ಕಾಲ್ ಮಾಡಿದ್ರು ಕಣೇ ಆಗ ಅಂಕಲ್ ನೀನು ಒಂದು ಮೊಬೈಲ್ ತಕೋ ಅಂದ್ರು ಮತ್ತೆ ನೀನು ಕೂಡಾ ಮೊಬೈಲ್ ಕಾಣಿಸಿ ಅದರ ಬಗ್ಗೆ ಹೇಳಿದ್ದಿ ಅಲ್ವಾ? ನಂಗೂ ಆಸೆ ಆಯ್ತು ಕಣೇ. ಆದ್ರೆ ಅಪ್ಪ-ಅಮ್ಮ ನಮಗೆ ತಮ್ಮ ಆಸೆ ಆಕಾಂಕ್ಷೆ ನ ಬಲಿ ಕೊಟ್ಟು ನಮಗೆ ಓದೋಕೆ ಅಂತ ತ್ಯಾಗ ಮಾಡಿ ಇರ್ತಾರೆ. ನಾವುಗಳು ನಮ್ಮ ಹದಿಹರೆಯ ದಿನದಂದು ಪಾಲಕರನ್ನು ಕಡೆಗಣಿಸಿ ಓದಿನ ಕಡೆ ಗಮನಹರಿಸದೇ ನಮ್ಮ ಗುಂಗಿನಲ್ಲಿಯೇ ಇದ್ದು ಸಮಯ ವ್ಯರ್ಥ ಮಾಡಿ ಕೊನೆಗೆ ಪಶ್ಚಾತಾಪದಿಂದ ನೊಂದುಕೊಂಡು, ಹೆತ್ತವರಿಗೂ ಕೂಡಾ ನೋವು ಕೊಡ್ತೇವೆ. ಓದೋ ಟೈಮ ಅಲ್ಲಿ ಇಷ್ಟಾ ಪಟ್ಟು ಓದಿ ಒಂದು ದಡ ಸೇರಿದರೆ ನಮಗೂ ಖುಷಿ ಹೆತ್ತವರಿಗೂ ಹೆಮ್ಮೆ ಮತ್ತು ಖುಷಿ ಆಗುತ್ತೇ ಅಲ್ವೇನೆ? ಸುಮಿ. ನಿಜ ಕಣೆ ಸುಕ್ಕು ನಿನ್ನ ಮಾತು 100% ನಿಜ. ನನ್ನ ಕಣ್ಣನ್ನು ನೀನು ತೆರೆಸಿದ್ದೀಯಾ ಥ್ಯಾಂಕ್ ಯು ಸೋ ಮಚ್ ಸುಕ್ಕು. ನಾನು ಓದಿನ ಕಡೆ ಗಮನ ಕೊಡದೆ ವಾಟ್ಸ್ ಆಪ್ ನಲ್ಲಿಯೇ ಸಮಯ ಕಳೆಯೋದು ಜಾಸ್ತಿ. ಇವತ್ತಿನಿಂದ ಓದುವುದಕ್ಕೆ ಒತ್ತು ಕೊಡುತ್ತೇನೆ. ಗೆಳತನದಲ್ಲಿ ಥ್ಯಾಂಕ್ಸ್ ಹೇಳಲೇ ಬೇಕಾ? ಸುಮಿ ಅಂತ ಹುಸಿ ಕೋಪ ಪ್ರದರ್ಶಿಸಿದಳು ಸುಕನ್ಯಾ. ಹಾಗಲ್ಲಾ ಕಣೋ ಅಂತ ದಬ್ಬಿಕೊಂಡಳು ಸುಮಾ. ಸುಮಿ ಅಪ್ಪ-ಅಮ್ಮನ ನೋಡ್ಬೇಕು ಅನಿಸ್ತಿದೆ ಹೇಗೂ ಎರಡು ದಿನಾ ಯುಗಾದಿ ಸಲುವಾಗಿ ರಜೆ ಇದೆ ನಾ ಹೋಗಿ ಬರ್ತೆ. ಸರಿ ಸುಕ್ಕು ಬಟ್ಟೆ ಬರೆ ತುಂಬಿಕೊಳ್ಳೊಣಾ ನಾನು ನನ್ನ ಊರಿಗೆ ಹೋಗ್ತೆ, ಬಸ ಸ್ಟಾಂಡ್ ವರೆಗೂ ನಾನು ಬರ್ತೆ. ಸರಿ ಎಂದು ಇಬ್ಬರೂ ತಮ್ಮ ತಮ್ಮ ಬಟ್ಟೆ-ಬರೆ ತುಂಬಿಕೊಳ್ಳಲು ಅನುವಾದರು. ನಂತರ ಪಿ.ಜಿ ಅಂಕಲ್ ಅಲ್ಲಿಗೆ ಹೋಗಿ ರೂಂ ನ ಕೀ ನೀಡಿ ಹೊರಟರು.

ಸುಮಿ ಬಾಯ್. ಕಣೇ, ಅಲ್ನೋಡು ನಮ್ಮೂರ ಬಸ್ಸು. ನಿನ್ನೂರಿನ ಬಸ್ಸು ಬಂದಿದೆಯಾ? ಹಾಂ.. ಅಲ್ಲಿ ನೋಡಿ ಆಗಲೇ ಹೊರಡ್ತಾ ಇದೆ. ಓಕೆ ಬಾಯ್ ಸುಕ್ಕು ಹುಷಾರು. ಹಾ.. ಸುಮಿ ನೀನು ಹುಷಾರು… ಒಬ್ಬರಿಗೊಬ್ಬರು ಬೀಳ್ಕೊಟ್ಟರು. ಸುಕನ್ಯಾ ತನ್ನೂರಿನ ಬಸ್ಸಿನಲ್ಲಿ ಬಂದು ಕುಳಿತು ಕಂಡಕ್ಟರ್ ನಿಂದ ಟಿಕೇಟ್ ಪಡೆದುಕೊಂಡಳು. ಅಮ್ಮ-ಅಪ್ಪ ನ ಯೋಚಿಸುತ್ತಾ ಕಿಟಕಿ ಪಕ್ಕದಲ್ಲಿ ಕುಳಿತವಳಿಗೆ ನಿದ್ದೆ ಬಂದಿದ್ದು ಗೊತ್ತೆ ಆಗಲಿಲ್ಲ. ಕಂಡಕ್ಟರ್ ಬಂದು ಎಬ್ಬಿಸಿದಾಗಲೇ ಎಚ್ಚರವಾಗಿ, ಮುಜುಗರದಿಂದ ಬಸ್ಸಿನಿಂದ ಇಳಿದಳು. ಇಳಿಯುವಾಗ ಕಂಡಕ್ಟರ್ ರಿಗೆ ಧನ್ಯವಾದಳು ಹೇಳುವುದನ್ನು ಮರೆಯಲಿಲ್ಲ ಸುಕನ್ಯಾ.

ಮನೆ ಸಿಂಗರಿಸುತ್ತಿದ್ದ ಶ್ಯಾಮಣ್ಣರಿಗೆ ಮುದ್ದು ಮಗಳು ಬರುವುದು ದೂರದಿಂದಲೆ ನೋಡಿ, ಏನೇ…? ಮಗಳು ಬರ್ತಾ ಇದ್ದಾಳೆ ನೋಡು ಎಂದು ಇದ್ದಲ್ಲಿಂದಲೇ ಕೂಗಿದರು. ಗಂಡನ ಕೂಗು ಕೇಳಿ ಅಡುಗೆ ಮಾಡುತ್ತಿದ್ದ ದೇವಮ್ಮ ಸೆರಗಲ್ಲೇ ಕೈ ಒರೆಸುತ್ತಾ ಹೊರಗಡೆಗೆ ಬಂದರು. ಅಷ್ಟರಲ್ಲಿ ಸುಕನ್ಯಾ ಮನೆಯ ಅಂಗಳಕ್ಕೆ ಬಂದಾಗಿತ್ತು. ಬಾರೆ ಬಾರೆ ಪ್ರಯಾಣ ಸುಖಕರವಾಗಿತ್ತು ಅಲ್ವಾ.? ಎಂದರು ದೇವಮ್ಮ. ಹಾ.. ಅಮ್ಮ ಎಂದು ತಬ್ಬಿಕೊಂಡಳು ಸುಕನ್ಯಾ. ಶ್ಯಾಮಣ್ಣನವರು ಅವರಲ್ಲಿಗೆ ಬಂದು ಮುದ್ದು ಮಗಳ ತಲೆ ನೇವರಿಸಿದರು ಪ್ರೀತಿಯಿಂದ. ಆಗ ಇಬ್ಬರನ್ನು ತಬ್ಬಿಕೊಂಡಳು ಮುದ್ದು ಮಗಳು ಸುಕನ್ಯಾ. ಅಲ್ಲೊಂದು ಸಡಗರವೇ ನಿರ್ಮಾಣವಾಗಿತ್ತು. ಶ್ಯಾಮಣ್ಣನವರು ಕೆಲಸಕ್ಕೆ ತೆರಳಿದ ನಂತರ ಅಮ್ಮ ಮಗಳಿಬ್ಬರೂ ಕೂಡಿ ಒಳಗಡೆ ನಡೆದರು.

ಈ ಯುಗಾದಿಗೆ ಮಗಳು ಬಂದಿದ್ದು ಮನೆಯಲ್ಲಿ ಸಂಭ್ರಮ ಜೊತೆ ಸಡಗರ ತಂದಿತ್ತು. ಪೂಜೆ ಪುರಸ್ಕಾರದ ನಂತರ ಹಬ್ಬದ ಅಡುಗೆ ಊಟ ಮಾಡಿ ಕುಳಿತುಕೊಂಡು ಹರಟುವಾಗ ಶ್ಯಾಮಣ್ಣನವರು ಮೊದಲೇ ತಂದಿಟ್ಟಿದ್ದ ಕವರ್ ಅನ್ನು ಮಗಳಿಗೆ ಕೊಟ್ಟರು ಪ್ರೀತಿಯಿಂದ. ಕವರ್ ಬಿಚ್ಚಿದವಳಿಗೆ ಆಶ್ವರ್ಯ ಕಾದಿತ್ತು. ತಾನು ಆಸೆ ಪಟ್ಟ, ಕೇಳಬೇಕು ಅಂತಿದ್ದ ಮೊಬೈಲ್ ಅನ್ನು ಅಪ್ಪನೆ ತಾನು ಕೇಳದೆ ಇದ್ದರು ಕೊಟ್ಟದಕ್ಕೆ ಖುಷಿ ಜೊತೆ ಕಣ್ಣಂಚಿನಲ್ಲಿ ಆನಂದದ ಭಾಷ್ಪ. ಮಗಳ ಕಣ್ಣಲ್ಲಿ ಕಣ್ಣೀರ ನೋಡಿ ಶ್ಯಾಮಣ್ಣನವರು ಯಾಕೆ? ಮಗಳೆ ಅಳ್ತಾ ಇದಿಯಾ? ಅಳ್ತಾ ಇಲ್ಲಾ ಅಪ್ಪಾ ನನಗೆ ಖುಷಿಗೆ ಕಣ್ಣೀರು ಬಂತು. ಹೌದಾ..! ಇಷ್ಟ ಆಯ್ತಾ? ಎಂದರು ಶ್ಯಾಮಣ್ಣ. ಹೌದು ಪಪ್ಪಾ ಥ್ಯಾಂಕು ಸೋ ಮಚ್, ಲವ್ ಯು ಪಪ್ಪಾ.. ಶ್ಯಾಮಣ್ಣರು ನಕ್ಕರು ಮಗಳ ಮಾತಿಗೆ. ಮಗಳ ಖುಷಿಯಲ್ಲಿ ತಾವೂ ಜೊತೆಯಾಗಿ ಹಬ್ಬವನ್ನು ಆಚರಿಸಿದರು. ಸಮಯ ಹೋಗಿದ್ದು ಮೂವರಿಗೂ ಅನಿಸಲೇ ಇಲ್ಲಾ. ಸುಕನ್ಯಾ ಹೊರಡಲು ಸಿದ್ಧಳಾದಳು. ಎರಡು ದಿನ ಇದ್ದ ಅವಳಿಗೆ ಹೋಗಲು ಮನಸ್ಸಾಗಲಿಲ್ಲ. ಭಾರದ ಮನಸ್ಸಿನಿಂದ ಅಪ್ಪ-ಅಮ್ಮ ನಿಗೆ ವಂದಿಸಿ ಅಲ್ಲಿಂದ ಹೊರಟಳು.

ಬಸ್ ಹತ್ತಿ ಹೋಗುವಾಗ ಮನಸ್ಸಿನಲ್ಲಿಯೇ ಒಂದು ನಿರ್ಧಾರಕ್ಕೆ ಬಂದಳು ಅಪ್ಪ ಕಷ್ಟದ ದಿನದಲ್ಲೂ ಕೂಡಾ ಮೊಬೈಲ್ ನೀಡಿರುವುದು ಅವಳಿಗೆ ಕಾಡಿತು. ಈ ಮೊಬೈಲ್ ಗೀಳನ್ನು ಹಚ್ಚಿಕೊಳ್ಳಬಾರದು. ಮತ್ತು ಎಷ್ಟು ಬೇಕೋ ಅಷ್ಟು ಉಪಯೋಗಿಸಿ ಚೆನ್ನಾಗಿ ಓದಿ, ಉತ್ತಮ ಮಾರ್ಕ ತೆಗೆದುಕೊಂಡು ಹೆತ್ತವರಿಗೆ ಖುಷಿಯಾಗೊ ರೀತಿಲಿ ಬಾಳ ಬೇಕು ಎಂದು ನಿರ್ಧರಿಸಿದಳು ಸುಕನ್ಯಾ. ಅದರಂತೆ ಮೊಬೈಲ್ ನ್ನು ಎಷ್ಟು ಬೇಕೋ ಅಷ್ಟನ್ನೇ ಉಪಯೋಗಿಸಿಕೊಂಡು ಇಷ್ಟ ಪಟ್ಟು ಓದಿ ತಾನು ನಿರ್ಧರಿಸಿದಂತೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಎಂಬಿಎ ಕೋರ್ಸ್ ನಲ್ಲಿ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದಳು. ಸರಿಯಾದ ನಿರ್ಧಾರದಿಂದ ಜೀವನ ರೂಪಿಸಿಕೊಂಡು, ಉತ್ತಮ ಸಂಬಳ ಬರುವ ಉದ್ಯೋಗ ಪಡೆದು, ಅಪ್ಪ ನೋಡಿದ ವರನನ್ನು ವರಿಸಿ, ತನ್ನಿಬ್ಬರ ಮಕ್ಕಳೊಂದಿಗೆ ಸಮಾಜದಲ್ಲಿ ಗೌರವದಿಂದ ಬದುಕುತ್ತಿರುವಳು ಈ ಕಥೆಯ ಕಥಾ ನಾಯಕಿ ಸುಕನ್ಯಾ.

SHANKAR G

Share
Published by
SHANKAR G

Recent Posts

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…

55 years ago

ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ “ನುಡಿಗಳ ಅಳಿವು” ವಿಮರ್ಶಾ ಸಂಕಲನಕ್ಕೆ ೨೦೨೪ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.

೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…

55 years ago

ಡಿಸೆಂಬರ್ 7, ಶನಿವಾರದಂದು ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಶೆ ಕಾರ್ಯಕ್ರಮ

ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…

55 years ago