ಬೆಳಕ ಶಾಲೆಯಲಿ ಕತ್ತಲೆಯ ಪಾಠಗಳ ಕಲಿಯಬೇಕಾಗಿದೆ
ಮುರುಕು ಮನೆಯಲಿ ಕಟ್ಟುವ ಆಟಗಳ ಆಡಬೇಕಾಗಿದೆ
ಕಟ್ಟಿಸಿದವರೆಲ್ಲ ಕೆತ್ತಿಸಿರುವರು ಕಲ್ಲಿನಲಿ ತಮ್ಮ ತಮ್ಮ ಹೆಸರು
ಮಳೆ ಗಾಳಿಯಿಂದಲ್ಲ ನೋಟ ಸ್ಥಾವರಗಳ ಸೀಳದಂತಿಡಬೇಕಾಗಿದೆ
ಸಪ್ಪೆಯಾಗುತ್ತಿವೆ ಉಪ್ಪಿನ ಕುರಿತಾದ ಕಥೆ ಕವನಗಳು
ರುಚಿಯ ಊರಿನಲಿ ಸಂಗೀತದ ಕಛೇರಿಗಳ ನಡೆಸಬೇಕಾಗಿದೆ
ಪುಗಸಟ್ಟೆ ಬಾಜಾರಲಿ ಮಾರಾಟಕ್ಕಿವೆ ಹಳಸಿದ ಪರಿಕರಗಳು
ಕೊಳ್ಳುಬಾಕರ ಮುಂದುಗಡೆ ಖಾಲಿ ಗಾಡಿಗಳ ಓಡಿಸಬೇಕಾಗಿದೆ
ಕೆಂಡವಿಲ್ಲದ ಒಲೆಯಲಿ ಅಡುಗೆ ಮಾಡಬೇಡ ‘ಕವಿ’
ಭ್ರಮೆಯ ತಾಟಿನಲಿ ಬಡಿಸಿದ ತುತ್ತುಗಳ ಉಣ್ಣಬೇಕಾಗಿದೆ.
ಪ್ರೀತಿಯ ಓದುಗರೇ, ನಿಮ್ಮ ಬೆಂಬಲದಿಂದಾಗಿ ಮಿಂಚುಳ್ಳಿ ಪ್ರಕಾಶನದಲ್ಲಿ ಪ್ರಕಟಿಸಿರುವ ಎಲ್ಲ ಪುಸ್ತಕಗಳ ಪ್ರತಿಗಳು ಖಾಲಿಯಾಗಿವೆ. ವಿಶೇಷವಾಗಿ "ಬಿದಿರ ತಡಿಕೆ", "ಮಳೆ…
ದಿನಾಂಕ 24/11/2024ರಂದು ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ೨೦೨೪ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.…
ಎಲ್ಲರೂ ಸೌಖ್ಯವಾಗಿದ್ದೀರಿ ಎಂಬ ಭಾವದೊಂದಿಗೆ ತಮ್ಮ ಮುಂದೆ ಗಜಲ್ ಗಂಗೋತ್ರಿಯ ಸಮೇತ ಅದೂ ಗಜಲ್ ಬಾನಂಗಳದಲ್ಲಿ ಮಿಂಚಿ ಮರೆಯಾದ ಶಾಯರ್…
View Comments
Super
Wonderful gajhal sir 🙏🙏🙏
ಇಂದಿನ ಶಿಕ್ಷಣ ಕಲಿಯುವ ಮಕ್ಕಳ ಪರಿಸ್ಥಿತಿ ಈ ರೀತಿಯಾದ ವ್ಯವಸ್ಥೆಯಾಗಿದೆ ಗಜಲ್ ತುಂಬಾ ಚೆನ್ನಾಗಿದೆ
Super sir
ದಿಲ್ನುಮಾ ಗಝಲ್ ಕವಿಗಳೇ