ಮಾತಿನ ಮಂಟಪ ಕಟ್ಟಿ
ಭರವಸೆಗಳ ಗೋಪುರ ಕುಟ್ಟಿ
ಹಣದ ಮಳೆಯ ,
ಮದ್ಯದ ಹೊಳೆಯ
ಕರುನಾಡಲಿ ಮೌನದಿ ಹರಿಸಿ;
ಎದುರಾಳಿಗೆ ಜಾತೀಯ
ಕತ್ತಿಯ ತೋರಿಸಿ,
ಧರ್ಮದ ನಶೆಯನು
ನರರಿಗೆ ಏರಿಸಿ;
ಉಚಿತವೆಂಬ ಸ್ವರ್ಗದ ಬಾವಿಗೆ
ಹಗಲಲ್ಲೇ ಬೀಳಿಸಿ;
ಮತದಾರರ ಮನದಿ ಗೊಂದಲಗಳ
ಸರಮಾಲೆಯ ಮೂಡಿಸಿ;
ಆಸೆಯ ಅರಮನೆಯ ಕಟ್ಟುವೆವೆಂದು
ನಯವಂಚಿಸಿ;
ಮಾನವೀಯತೆಯ ಮಣ್ಣುಪಾಲು
ಮಾಡಿ;
ಜನರ ಎದೆಯಲಿ ದ್ವೇಷದ ಬೆಂಕಿಯ
ಅಂಟಿಸಿ;
ಕುರ್ಚಿಯ ಮೋಹದಲಿ
ಸಂಚು ಹೂಡಿ, ಹೊಂಚುಹಾಕಿ
ರಾಜಕೀಯದ;
ಪಟ್ಟುಗಳ ಕುಲುಮೆಯಲಿ
ಕಾಯಿಸಿದ ಕಬ್ಬಿಣದಂತೆ,
ಅಧಿಕಾರವ ಹಿಡಿಯಲು,
ಹಸಿರು ಬಾವುಟದ
ಆಗಮನಕ್ಕೆ
ಜಾತಕ ಪಕ್ಷಿಯಂತೆ
ಕಾಯುತಿವೆ;
ಕರುಣೆಯಿಲ್ಲದ
ಎದೆಗಳು
ಅಧಿಕಾರದ ನರಿಗಳು!
೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಶಿಷ್ಯರ ಪ್ರೀತಿಯ ಮೇಷ್ಟ್ರು ಕೆ.ವಿ. ನಾರಾಯಣ ಅವರ "ನುಡಿಗಳ ಅಳಿವು"…
ಪುಸ್ತಕ ಪರಿಶೆ; ಹಗಲಿರುಳು ಕನಸು ಕಂಡು ಆ ಕನಸನ್ನು ನನಸು ಮಾಡಿಕೊಳ್ಳುವ ಪ್ರಯತ್ನದಲ್ಲಿ ನಾವೆಲ್ಲ ತಂಡವಾಗಿ ಪರಿಚಾರಿಕೆ ಮಾಡುತ್ತಿದ್ದೇವೆ. ನಾಳೆಯೇ…