ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ.
ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಈ ಹೊತ್ತಿಗೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮವಿದೆ. ಕಾರ್ಯಕ್ರಮದಲ್ಲಿ ೨೦೨೫ನೇ ಸಾಲಿನ ಈ ಹೊತ್ತಿಗೆ ಕಥಾಪ್ರಶಸ್ತಿ ಹಾಗೂ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ಪ್ರದಾನವಿದ್ದು, ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ. ಎಲ್ ಎನ್ ಮುಕುಂದರಾಜ್ ನೆರವೇರಿಸಲಿದ್ದಾರೆ. ಈ ವರ್ಷದ ಕಾವ್ಯ ಪ್ರಶಸ್ತಿ ವಿಜೇತರು, ಡಾ. ಲಕ್ಷ್ಮಣ ವಿ ಎ ಹಾಗೂ ಕಥಾಪ್ರಶಸ್ತಿ ವಿಜೇತರು ಪೂರ್ಣಿಮಾ ಭಟ್ಟ ಸಣ್ಣಕೇರಿ ಅವರಾಗಿದ್ದು, ಇದೇ ಸಮಯದಲ್ಲಿ ಪ್ರಶಸ್ತಿ ವಿಜೇತ ಕೃತಿಗಳ ಲೋಕಾರ್ಪಣೆಯಾಗಲಿದೆ. ಕೃತಿ ಪರಿಚಯವನ್ನು ಆನಂದ ಕುಂಚನೂರ್ ಮತ್ತು ಸಂಗೀತಾ ಚಚಡಿ ಮಾಡಿಕೊಡಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಒಂದು ಗೋಷ್ಠಿ ಹಾಗೂ ಒಂದು ಸಂವಾದವಿದೆ. ‘ಅಕ್ಷರ ಜಾನಪದ’ ಎಂಬ ಗೋಷ್ಠಿಯಲ್ಲಿ, ಖ್ಯಾತ ಗಾಯಕರಾದ ಜನಪದಶ್ರೀ. ಅಪ್ಪಗೆರೆ ತಿಮ್ಮರಾಜು ಹಾಗೂ ಜಾನಪದ ತಜ್ಞೆ, ಕವಿ ರೇಣುಕಾ ಕೋಡಗುಂಟಿ ಅವರು ಮಾತನಾಡಲಿದ್ದಾರೆ, ಈ ಗೋಷ್ಠಿಯ ಅಧ್ಯಕ್ಷ್ಯತೆಯನ್ನು ಖ್ಯಾತ ಕತೆಗಾರ್ತಿ, ಕಾದಂಬರಿಗಾರ್ತಿ ಜಯಶ್ರೀ ದೇಶಪಾಂಡೆ ನಿರ್ವಹಿಸಲಿದ್ದಾರೆ.
ಗೋಷ್ಠಿಯ ನಂತರ ‘AI ಮತ್ತು ಸಾಹಿತ್ಯ’ ವಿಷಯದ ಮೇಲೆ ಸಂವಾದವಿದ್ದು, ತಂತ್ರಜ್ಞಾನ ಪರಿಣಿತರು, ಕತೆಗಾರರೂ ಆದ ಮಧುಸೂದನ ವೈ ಎನ್ ಹಾಗೂ ಪತ್ರಕರ್ತಾದ ಶ್ರೀದೇವಿ ಡಿ ಎನ್ (ಶ್ರೀ ಡಿ ಎನ್) ಅವರು ಸಂವಾದ ನಡೆಸಲಿದ್ದಾರೆ.
ಈ ವರ್ಷದ ಪ್ರಶಸ್ತಿಗಳ ತೀರ್ಪುಗರಾರಾಗಿರುವ ಖ್ಯಾತ ಕತೆಗಾರ, ಪತ್ರಕರ್ತರಾದ ರಘುನಾಥ ಚ ಹ ಮತ್ತು ಖ್ಯಾತ ಕವಿ, ದೂರದರ್ಶನ ಚಂದನದ ಮುಖ್ಯಸ್ಥರಾದ ಆರತಿ ಎಚ್ ಎನ್ ಅವರು ಹಾಗೂ ಕತೆಗಾರ, ಚಲನಚಿತ್ರ ನಿರ್ದೇಶಕರಾದ ಪ್ರವೀಣ್ ಕುಮಾರ್ ಜಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಈ ಹೊತ್ತಿಗೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಇಂದಿರಾ ಶರಣ್ ಕಾರ್ಯಕ್ರಮದ ನಿರೂಪಣೆ, ಸರ್ವಮಂಗಳಾ ಮೋಹನ್ ಅವರು ಅತಿಥಿಗಳ ಪರಿಚಯ ಮಾಡಲಿದ್ದಾರೆ.
ದಿನಾಂಕ: ೦೯ ಮಾರ್ಚ್ ೨೦೨೫, ಭಾನುವಾರ
ಸಮಯ: ಬೆಳಗ್ಗೆ ೧೦.೦೦ರಿಂದ ಮದ್ಯಾಹ್ನ ೦೧.೩೦ರವರೆಗೆ
ಸ್ಥಳ: ಕಪ್ಪಣ್ಣ ಅಂಗಳ, ೧೪೮/೧, ೩೨ನೇ ಎ ಮುಖ್ಯರಸ್ತೆ, ಜೆಪಿ ನಗರ, ೧ನೇ ಹಂತ, ಬೆಂಗಳೂರು.
ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ.…
ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.…
ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ…
1. ಕಾರ್ಯಕ್ರಮದ ಹೆಸರು: What We See, We Weave Magic: Multilingual Poetry Readings ಭಾಗವಹಿಸುತ್ತಿರುವ ಕನ್ನಡದ ಲೇಖಕ:…
ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ…
೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…