ಸಾಹಿತ್ಯ ಸುದ್ದಿ

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥೆ ಮತ್ತು ಕಾವ್ಯ ಸಂಕಲನಗಳ ಹಸ್ತಪ್ರತಿ ಆಹ್ವಾನ

2024ರ ಸಾಲಿನ ‘ಈ ಹೊತ್ತಿಗೆ ಪ್ರಶಸ್ತಿ’ಗಳಿಗಾಗಿ ಕನ್ನಡದ ಅಪ್ರಕಟಿತ ಕಥಾ ಸಂಕಲನ ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಈ ಹೊತ್ತಿಗೆ ಸಂಸ್ಥೆ ಆಹ್ವಾನಿಸುತ್ತಿದೆ.

ವಿಜೇತ ಕಥಾಸಂಕಲನ ಮತ್ತು ಕವನ ಸಂಕಲನಕ್ಕೆ ತಲಾ 10,000 (ಹತ್ತು ಸಾವಿರ) ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು.

ನಿಯಮಗಳು :
1. ಕಥೆಗಳು/ಕವನಗಳು ಸ್ವತಂತ್ರವಾಗಿರಬೇಕು. ಅನುವಾದಿತ ಕಥೆ/ಕವನಗಳಿರಕೂಡದು.
2. ಕಥಾ ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.
3. ಕವನ ಸಂಕಲನವು 40-45 ಕವನಗಳನ್ನು ಒಳಗೊಂಡಿರಬೇಕು.
4. ಕಂಪ್ಯೂಟರಿನಲ್ಲಿ ಟೈಪ್ ಮಾಡಿ, ಪ್ರಿಂಟ್ ತೆಗೆಸಿ ಬೈಂಡ್ ಮಾಡಿದ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.
5. ಕವಿಗಳು / ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಸಂಕಲನದ ಯಾವುದೇ ಪುಟಗಳಲ್ಲಿ ಲೇಖಕರ ಹೆಸರು ಇರಕೂಡದು.
6. ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.
7. ಪ್ರಶಸ್ತಿ ಪಡೆದ ಕೃತಿಯನ್ನು ಮುದ್ರಿಸುವಾಗ ಮುಖಪುಟ ಹಾಗು ಪುಸ್ತಕದ ಒಳ ಪುಟದಲ್ಲಿ ‘ಈ ಹೊತ್ತಿಗೆ (ಕಥಾ/ಕಾವ್ಯ) ಪ್ರಶಸ್ತಿ ವಿಜೇತ ಕೃತಿ’ ಎಂದು ಮುದ್ರಿಸಿರಬೇಕು.
8. ಹಸ್ತಪ್ರತಿಗಳನ್ನು ಮರಳಿಸಲಾಗುವುದಿಲ್ಲ.
9. ನಿಮ್ಮ ಅಪ್ರಕಟಿತ ಕೃತಿಗಳು ನಮಗೆ ತಲುಪಲು ಕೊನೆಯ ದಿನಾಂಕ : 30 ನವೆಂಬರ್ 2023
*ಈ ಹೊತ್ತಿಗೆಯ ತೀರ್ಮಾನವೇ ಅಂತಿಮ.

ಹಸ್ತಪ್ರತಿ ಕಳುಹಿಸಲು ವಿಳಾಸ
ಈ ಹೊತ್ತಿಗೆ,
#65, ಮುಗುಳ್ನಗೆ, 3ನೇಯ ಅಡ್ಡರಸ್ತೆ ,
ಪಿ ಎನ್ ಬಿ ನಗರ, ಕೋಣನಕುಂಟೆ,
ಬೆಂಗಳೂರು – 560062
ಸಂಪರ್ಕ ಸಂಖ್ಯೆ: 9611782621

SHANKAR G

Recent Posts

ಹೀಗಿತ್ತು ಯೌವನಾಶ್ವ ಆಳುತ್ತಿದ್ದ ನಗರಿ – ಡಾ. ವಿಶ್ವನಾಥ್ ಏನ್. ನೇರಳಕಟ್ಟೆ

ಅಣ್ಣ ಧರ್ಮಜನ ಬಗೆಗೆ ಹೂಮನಸ್ಸನ್ನಿಟ್ಟುಕೊಂಡು ಯೌವನಾಶ್ವನ ಅಶ್ವವನ್ನು ಗೆದ್ದುತರುವ ಹುಮ್ಮಸ್ಸಿನಲ್ಲಿ ವೃಷಧ್ವಜ ಮೇಘನಾದರ ಜೊತೆಗೆ ಹಸ್ತಿನಾವತಿಯಿಂದ ಹೊರಟಿದ್ದ ಅನಿಲಸುತನೀಗ ಭದ್ರಾವತಿ…

56 years ago

ಬೆಳಗಾವಿಯಲ್ಲಿ ಜುಲೈ 21ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಳಗಾವಿ ವಲಯದ (7 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ 21ರಂದು ಬೆಳಗಾವಿಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು…

56 years ago

ತುಮಕೂರಿನಲ್ಲಿ ಜುಲೈ ೧೦ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ವಲಯದ (8 ಜಿಲ್ಲೆಗಳ) ಯುವಕವಿಗೋಷ್ಠಿ ಕಾರ್ಯಕ್ರಮ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಯುವಕವಿಗೋಷ್ಠಿಗೆ ಒಟ್ಟು ೨೩ ಯುವಕವಿಗಳು ಆಯ್ಕೆಯಾಗಿದ್ದು, ಜುಲೈ ೧೦ರಂದು ತುಮಕೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ…

56 years ago