ಸಿಕ್ಕಾಪಟ್ಟೆ ಇದ್ದವು ಮಾತುಗಳು ಎಷ್ಟೆಂದರೆ ಸಂಖ್ಯೆಯಲ್ಲಿ ಎಣಿಸಲಾಗದಷ್ಟು ಆಕಾಶದ ನಕ್ಷತ್ರಗಳನ್ನಾದರೂ ಎಣಿಸಬಹುದು ಎದೆಯ ಮಾತುಗಳನ್ನಲ್ಲ ಎದೆಯೊಳಗೆ ಅಡ್ಡಾಡಿದವು ತುಂಬಿಕೊಂಡವು ನದಿಯಂತೆ ಸಂಯಮದ ಅಣೆಕಟ್ಟು ಕಟ್ಟಿದ್ದೇ ತೀವ್ರ ನೋವನ್ನು…
ನನ್ನೊಳಗಿನ ಜಡಗೊಂಡ ಕತ್ತಲನ್ನು ಕದಲಿಸುವ, ಪ್ರೀತಿ ಪ್ರೇಮದ ಮೋಹದ ಬೆಳಕನ್ನು ನಿಂದಿಸುವ, ಜೀವಂತ ಪ್ರೇಮವನ್ನು ಹದಗೆಡಿಸುವ ಸಂಬಂಧ, ಅವ್ವನ ಇರುವಿಕೆಯ ಹೆಣ್ತನವನ್ನು ಹೀಯಾಳಿಸುತ್ತಿದೆ ಯಾರಿಲ್ಲದ ಹೊತ್ತಲ್ಲಿ ಹಾವಿನಂತೆ…
ಇಂದೇಕೋ.. ನನ್ನಲ್ಲಿ ನೀನು, ನಿನ್ನಲ್ಲಿ ನಾನು ಬೆರೆತಿದ್ದರೂ ಬೇರೆಯಾಗಲು ಜೀವ ತಲ್ಲಣಿಸಿದೆ. ದೂರಮಾಡದೆ ನಿನ್ನ ಹಾಗೆಯೇ ತಬ್ಬಿರಲು ಈ ಸಂಜೆಯ ಮಬ್ಬು ಬೆಂಬಿದ್ದಿದೆ ಮುಡಿಯಲ್ಲಿರೋ ಹೂವು ನನ್ನ…
ನಡೆವ ಹಾದಿಯ ಎದುರಿಗಿದೆ ದೊಡ್ಡ ಪರ್ವತ ನನ್ನ ಗಮ್ಯವೆಲ್ಲ ಅದನ್ನು ಏರುವುದಷ್ಟೇ ಕಲ್ಲು ಮರ ಅಥವಾ ಹಿಮದಿಂದಲೋ ಅದು ಆವೃತ ದೂರದಿಂದ ಕಾಣುವುದು ನುಣ್ಣಗಷ್ಟೇ ನಡೆವ ಹಾದಿಯಲ್ಲಿ…
ಪ್ರಭುತ್ವದ ಕಾಲದಲ್ಲಿತ್ತು ನನಗೆ ವೈಭವ ಮಳೆ ಸುರಿದು ಉಕ್ಕುತ್ತಿತ್ತು ನನ್ನ ಒಡಲು ಶುದ್ಧವಾಗಿ ನಾನು ಎಲ್ಲರ ಮನೇಸೇರುತ್ತಿದ್ದೆ ಊರಿನ ಆರೋಗ್ಯದ ಮೂಲವಾಗಿದ್ದೆ. ದೇವಳದ ಮುಂದೆ ನಾ ನಳನಳಿಸುತ್ತಿದ್ದೆ…
ಕವನ ನನ್ನದಾಗಿತ್ತೆಂದು ಬೀಗುವಾಗ ತಿಳಿದಿರಲಿಲ್ಲ ಅದು- ನನ್ನದಾಗಿತ್ತೆಂದು? ಮುತ್ತಜ್ಜನ ಅಜ್ಜ ಕಾಳುಣಿಸಿ ಪೊರೆದ ಅಕ್ಷರದ ಹಕ್ಕಿ ಓಲೆಗರಿ ಕೆದರುತ್ತ ಹಾರಿ ಹಾರಿ ತಾವು ಹುಡುಕುವ ಹಾದಿ! ಗೂಡು…
ಮತ್ತೆ ಮತ್ತೆ ನೀ ಅತ್ತು ಕೊರಗದಿರು ಬಾಳಲಿ ಭರವಸೆಯಿಡು ಮನವೆ ಬತ್ತಿದ ಕೆರೆಯಲು ನೀರು ತುಂಬುವುದು ಎಂಬ ಸತ್ಯವ ನೀ ಅರಿ ಮನವೆ ಬಿಸಿಲ ಬೇಗೆಯನು ಸಹಿಸುತ…
ಆಕಾಶದ ತಿರುಗಣೆಯಲ್ಲಿ ಚಂದ್ರನ ಟಾರ್ಚಿನ ಕಣ್ಬೆಳಕು ಕಾಲನ ಕಾಲಿಗೆ ಕಡೆಗೀಲಾಗಿದೆ ಆಟೋಂಬಾಂಬಿನ ತಿದಿಮುರುಕು ಕಾಡಿನ ಕುಸುಮದ ಎದೆಯೂ ಕಲ್ಲು ಮಂಚದ ಮೇಗಡೆ ನೆಗ್ಗಲ ಮುಳ್ಳು ಉಬ್ಬಿದ ಎದೆಗೆ…
ಹರಿದ ಮಾಸಲು ಅಂಗಿ ಮೊಣಕಾಲ್ಮೇಲಿನ ತುಂಡು ಚಡ್ಡಿ ಹೆಗಲ ಮೇಲಿನ ಚೀಲದಿಂದ ಇಣುಕುತ್ತಿದ್ದ ಹಳೆಯ ಪೇಪರ್, ಪ್ಲಾಸ್ಟಿಕ್ಕಿನ ಬಾಟಲಿಗಳು. ಹಗಲೆಲ್ಲಾ ಅಲೆದಲೆದು ತಂದದ್ದೆಲ್ಲಾ ಸಂಜೆಗೆ ಗುಜರಿಯವನ ಹಿತ್ತಲಿಗೆ,…
ಒಲೆಯ ಮೇಲಿರಿಸಿ ಬೇಳೆಯ ಬೇಯಿಸುವ ಪಾತ್ರೆಯೊಳಗಿನ ಸಟ್ಟುಗದಂತೆ ನಾವು ಈ ಬದುಕಲಿರಬೇಕು! ಒಲೆಯ ಕೆಳಗಿರುವ ಉರಿಗೆ, ಬೇಳೆಯು ತಾ ಉಕ್ಕುವುದ ತಡೆವ ಸಟ್ಟುಗದಂತೆ, ಕೋಪದಿ ಕುದಿಯುವ ಮನಗಳು…