ಕುಲವಾವುದಾದರೇನು ಮನವ ಅರಿತರೇ ಸಾಕು ಮಾನವೀಯತೆಯ ನೆಲೆಯಲ್ಲಿ ನಾವಿರಬೇಕು ಕುಲದಗೊಡವೆಯು ಬೇಡ ಕಲ್ಮಶದ ಕಸವ ಎಸೆದು ಕಾಯಕದ ಎದೆಯಬೆಸೆದು ಕದವ ತೆರೆಯಲೇಬೇಕು ಸಮಾಜದ ಸ್ವಾಸ್ಥ್ಯವ ಕದಡುವವರ ಕೆನ್ನೆಗೆರಡು…
ಸುಟ್ಟ ಬೂದಿಯಲ್ಲಿ ಹುಟ್ಟಿದ ಕವಿತೆಗಳು ತೊಟ್ಟು ಕಳಚಿ ತೊಟ್ಟು ಬಣ್ಣಬಣ್ಣದ ರೆಕ್ಕೆ ನಿರ್ದಿಗಂತ ಏರುತಿಹವು ಮೃಷ್ಟಾನ್ನ ಮುಷ್ಟಿಯಲ್ಲಿ ಮೊಗ್ಗಾದ ಕವಿತೆಗಳು ರತ್ನಗಂಬಳಿಹೊದ್ದು ತೂಕಡಿಸುತಿಹವು ಮೊಗಸಾಲೆಯಲ್ಲೇ ಬೊಜ್ಜುಬಂದು ಜನರ…
ಸ್ವಾಮ್ಯಾರಾsss ಊಟಮಾಡಿ ಮೂರು ದಿನಾತು ಬೇಡಿ ಕಾಡಿದೆ ಅವರಿವರ ಒಂದು ತುತ್ತು ಅನ್ನ ಸಿಗದಾತು... ಏನಾದರು ಕೊಡಿ ? ಬಡಪಾಯಿಯ ಹೊಟ್ಟೆಗೆ. ಎದುರು ಬೀದಿಯ ಶ್ರೀಮಂತರ ಕೇಳಿದೆ…
ಅಂದು... ಒಂದು ಸಣ್ಣ ಬೀಜವಾಗಿ ಮಣ್ಣಿನ ಕಣಕಣಕಣಗಳ ನಡುವೆ ಅಡಗಿ ಕಾಲಾಂತರದಿ ಧ್ಯಾನಿಸಿ ಮುಗಿಲ ಮೇಘ ತುಡಿದು ಹನಿಹನಿದು ಮಳೆಯಾಗಿ ಇಳೆಗೆ ಸುರಿದು ಜೀವ ಅಂಕುರಿಸಿ, ಮೊಳಕೆಯಾಗಿ…
ಮಿಕ್ಕಿದ್ದನ್ನೆಲ್ಲಾ ಮೃಗಶಿರಕ್ಕೆ ಬಿತ್ತಿ, ಹಸನಾದ ಮೇಲೆ ಭರಣಿ ತುಂಬದ ಮುಂಗಾರ ಕನಸುಗಳು... ಆರ್ಭಟಿಸುವ ಆರಿದ್ರಕ್ಕೆ ಕಂಪಿಸುತ್ತಾ, ಹಿಂಗಾರ ಕನಸುಗಳ ಮೂಟೆಯನು ಬಿತ್ತನೆಗೆ ಬಿಚ್ಚುವಾಗ, ಎದೆನೆಲವೆಂಬುದು ಹದಗೊಂಡ ಹರೆಯ.…
ಸಿಟ್ಟುಸುಣ್ಣ ಬಯಸಿ ಬಂದು ನಾಲಿಗೆಗೆ ತಗುಲಿ ಸುಟ್ಟು ಕೊಂಡಿದೆ ಜಗಳಕ್ಕಿಳಿದ ಅಹಂಕಾರವೆಲ್ಲ ಹರಿದು ಬಂದು ರುಚಿ ಇಲ್ಲದ ಸತ್ಯವ ಬೇಯಿಸಿಕೊಂಡಿದೆ ಬಯಲಲ್ಲಿ ಬಿದ್ದ ಬಣ್ಣ ಮುಪ್ಪಾಗಿ ದೇಹವ…
ಕಣ್ಣೀರು ಹಾಕುವ ಮೊಸಳೆಗಳು ಹೆಗಲು ಏರಿ ಹಾರಿವೆ ಬಾನೆತ್ತರ ಬಾಯಲ್ಲಿ ಪಾಸಿಟಿವ್ ಬೆಣ್ಣೆ ಹಿಡಿದ ಗೋಸುಂಬೆಗಳು ಮಿಂಚಿವೆ ಮಿರಮಿರ ಗುಂಪಿಗೆ ಸೇರದ ವಿಜಾತಿ ಜಾಣ ನರಿಗಳ ಕೊಳೆತ…
ಪ್ರಣಯದ ಎಳೆಗಳಿಂದ ವಿರಹವನ್ನೆಲ್ಲ ಕೂಡಿಸಿ ಹೆಣೆದು ಬಿಡು ಸಖಿ ನಿನ್ನಧರದಿಂದ ಮದಿರೆಯ ನಶೆಯನ್ನೆಲ್ಲ ನನ್ನೆದುರು ಕುಡಿದು ಬಿಡು ಸಖಿ ಸಂಜೆಯ ತಂಗಾಳಿಗೆ ಏನು ಗೊತ್ತು ನಿನ್ನ ಮೈ…
1) ನೆಪ..! ನೆಪಗಳೇ ಹಾಗೆ.. ಹೊಳೆಯಲ್ಲಿ ಮುಳುಗುವವನಿಗೆ ತೇಲುವ ದಿಮ್ಮಿ ಸಿಕ್ಕಂತೆ ಆಸರೆ ಕೈಗೆ! ನೆಪಗಳೇ ಹಾಗೆ.. ಬರುವುದು ಭೀಕರ ಬರಗಾಲದಲ್ಲಿ ಅಕಾಲಿಕ ಮಳೆಯಂತೆ ತಂಪು ಚೆಲ್ಲಿ!…
ನೋಡಿದ್ದೀರಿ ನೀವು, ಬ್ರಿಟಿಷರ ದುರಾಡಳಿತ,ಕಿಂಗ್ ಜಾರ್ಜರ ರಾಜಪ್ರಭುತ್ವ ನೋಡಿದಿರಲ್ಲ ನೆಹರುನಿಂದ ಮೋದಿವರೆಗೆ ಸ್ವರಾಜ್ಯ, ಪ್ರಜಾಪ್ರಭುತ್ವ ಅಂದು ಹೇಳದಿದ್ರೆ "ಕಿಂಗ್ ಇಸ್ ಗಾಡ್" ಬೀಳುತಿದ್ವು ಏಟು ಇಂದು ನಮಗೆ…