ಸಾಹಿತ್ಯ ಸುದ್ದಿ

ಅರಳಿ ನೆರಳು ಕೃತಿ ಲೋಕಾರ್ಪಣೆ

ಅಭಿಜ್ಞಾನ ಪ್ರಕಾಶನ ಹಿಪ್ಪರಗ ಬಾಗ್ ತಾಲೂಕ ಬಸವಕಲ್ಯಾಣ ಜಿಲ್ಲಾ ಬೀದರ. ಹಾಗೂ ಸಾರನಾಥ ಪ.ಜಾ. ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ನಿ) ಇವರ ಸಂಯುಕ್ತಾಶ್ರಯದಲ್ಲಿ ಕವಿ ದೇವೇಂದ್ರ ಕಟ್ಟಿಮನಿ ಬರೆದಿರುವ “ಅರಳಿ ನೆರಳು” ಕೃತಿ ಲೋಕಾರ್ಪಣೆ ಮತ್ತು “ಸಮ್ಯಕ್ ಜ್ಞಾನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22/2/2025 ರಂದು ಕಲಬುರ್ಗಿ ನಗರದ ಜಿಲ್ಲಾ ಪಂಚಾಯತ್ ಆವರಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದು, ಪೂಜ್ಯ ಭಂತೆ ಸಂಘಾನಂದ ಥೆರೋ ಅವರ ದಿವ್ಯ ಸಾನಿಧ್ಯದಲ್ಲಿ, ಶ್ರೀ ಡಿ.ಜಿ.ರಾಜಣ್ಣ ಎ.ಸಿ.ಪಿ. ಸಬ್ ಅರ್ಬನ್ ಕಲಬುರ್ಗಿ ಅವರು ಉದ್ಘಾಟಿಸಲಿದ್ದು, ಪ್ರೊ. ಅಪ್ಪೆಗೆರೆ ಸೋಮಶೇಖರ್, ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ವೆಂಕಟೇಶ್ ಬೇವಿನ ಬೆಂಚಿ, ಅಧ್ಯಕ್ಷರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ರಾಯಚೂರು ಹಾಗೂ ಕಾರ್ಯಕ್ರಮ ನಿರ್ವಾಹಣಾಧಿಕಾರಿಗಳು ಆಕಾಶವಾಣಿ ರಾಯಚೂರು. ಶ್ರೀ ರಾವುತರಾವ್ ಬರೂರ್ ರಾಯಚೂರು, ಶ್ರೀ ಸತೀಶ್ ಬಿ ಹಳ್ಳಿ , ಪ್ರಕಾಶ್ ನರೋಣ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೆ. ಎಸ್. ಪಾಟೀಲ್ ನಿವೃತ್ತ ಪ್ರಾಂಶುಪಾಲರು ವಹಿಸಿಕೊಳ್ಳಲಿದ್ದಾರೆ. ಎಂದು ಅಭಿಜ್ಞಾನ ಪ್ರಕಾಶನದ ಅಧ್ಯಕ್ಷರಾದ ಶ್ರೀ ತಿಪ್ಪಣ್ಣ ಕಟ್ಟಿಮನಿಯವರು ತಿಳಿಸಿರುತ್ತಾರೆ.

SHANKAR G

View Comments

Recent Posts

ರೇವಣಸಿದ್ಧಪ್ಪ ಜಿ.ಆರ್. ಅವರಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರೇವಣಸಿದ್ಧಪ್ಪ ಜಿ.ಆರ್. ಅವರ "ಬಾಳ ನೌಕೆಗೆ ಬೆಳಕಿನ ದೀಪ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನವಕವಿಗಳ ಪ್ರಥಮ ಕೃತಿ ಪ್ರಶಸ್ತಿ.…

55 years ago

ಯುವ ವಿಮರ್ಶಕ ವಿನಯ ನಂದಿಹಾಳ ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ

ವಿನಯ್ ನಂದಿಹಾಳ್ ಅವರ "ಕಣ್ಣಂಚಿನ ಕಿಟಕಿ" ವಿಮರ್ಶಾ ಕೃತಿಗೆ ೨೦೨೨ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ ಪ್ರಕಟವಾಗಿದೆ.…

55 years ago

ಈ ಹೊತ್ತಿಗೆ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 09, 2025

ಸಾಹಿತ್ಯಾಸಕ್ತರೆಲ್ಲರಿಗೂ ಆತ್ಮೀಯ ಸ್ವಾಗತ. ದಿನಾಂಕ: ೦೯ ಮಾರ್ಚ್ ೨೦೨೫ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ…

55 years ago

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ

ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ "ವಿದಿಶಾ ಪ್ರಹಸನ" ಅನುವಾದದ ನಾಟಕ ಕೃತಿಗೆ ೨೦೨೪ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ…

55 years ago

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.

೨೦೨೫ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಗೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಸಾಹಿತ್ಯ ಅಕಾಡೆಮಿಯ ಮುಖ್ಯ ಪ್ರಶಸ್ತಿಯ ನಿಯಮಗಳಲ್ಲಿ ಬಹಳಷ್ಟು…

55 years ago